ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ‘ಬಾಕ್ಸರ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಪ್ರೀತಂಗುಬ್ಬಿ ನಿರ್ದೇಶನದ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಪ್ರೀತಾ ಛಾಯಾಗ್ರಹಣ, ಜೋ.ನಿ.ಹರ್ಷ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ ನೃತ್ಯ ನಿರ್ದೇಶನವಿರುವ ಈ ಚಿತ್ರದ ಸಂಭಾಷಣೆಯನ್ನು ಶಂಕರ್ ಬರೆದಿದ್ದಾರೆ. ಧನಂಜಯ್, ಕೃತಿಕ ಜಯಕುಮಾರ್, ರಂಗಾಯಣ ರಘು, ಚರಣ್ ದೀಪ್, ಸುಮಿತ್ರ, ಶಿವಪ್ರದೀಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.